ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಗಳು ( ಒಳಾಡಳಿತ ), ಗೃಹ ಇಲಾಖೆ ಇವರ ಸಂದೇಶ / Message from Honourable Principal Secretary to Government ( PCAS ), Home Department

ನಮ್ಮ ರಾಷ್ಟ್ರದ ಸಶಸ್ತ್ರ ಪಡೆಗಳು ದೇಶದ  ಭೂಮಿ, ಜಲ ಮತ್ತು ವಾಯು ಪ್ರದೇಶದ ಒಟ್ಟಾರೆ  ಸುರಕ್ಷತೆಯಲ್ಲಿ ಕಾಪಾಡುವುದೂ ಸೇರಿದಂತೆ ದೇಶವನ್ನು ಬಾಹ್ಯ ಆಕ್ರಮಣ, ಆಂತರಿಕ ಗಲಭೆ ಮತ್ತು ನೈಸರ್ಗಿಕ  ವಿಕೋಪಗಳಿಂದ ಕಾಪಾಡಲು ಸದಾ ಸನ್ನದ್ದರಾಗಿವೆ.

ನಮ್ಮ ರಾಜ್ಯದ ಅಧಿಕಾರಿಗಳು ಮತ್ತು ಸೈನಿಕರು ದೇಶ ರಕ್ಷಣೆ ಕಾರ್ಯದಲ್ಲಿ ಸದಾ ಸನ್ನದ್ಧರಾಗಿದ್ದು, ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿರುವ ಸಾಕಷ್ಟು ಉದಾಹರಣೆಗಳಿವೆ. ನಾನು ಯುದ್ಧ ಸಂತ್ರಸ್ಥರ ಮತ್ತು ಮಾಜಿ ಯೋಧರ ಕಲ್ಯಾಣ ಮತ್ತು ಪುನರ್ವಸತಿ ಸಂಬಂಧ ಕಾರ್ಯಪ್ರವೃತ್ತನಾಗಿರುವ ಶುಭಯೋಗ ದೊರಕಿರುವುದು ಸಂತೋಷ ತಂದಿರುತ್ತದೆ. ಯುದ್ಧ ಸಂತ್ರಸ್ಥರಿಗೆ ಹಾಗೂ ಮಾಜಿ ಸೈನಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಸೇವೆ ಒದಗಿಸುವ ಸಂಬಂಧ ನಾವು ಇಲಾಖೆಯ ಆಂತರ್ಜಾಲವನ್ನು ಜಾರಿಗೆ ತಂದಿದ್ದೇವೆ. ಈ ಅಂತರ್ಜಾಲದ ಮುಖಾಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳ ಮಾಹಿತಿ ಅಲ್ಲದೆ ಉದ್ಯೋಗದಾತರಿಂದ ಕೇಳಲಾದ ಉದ್ಯೋಗ ಮಾಹಿತಿಯೂ ಲಭ್ಯವಿರುತ್ತದೆ. ಇದರಿಂದಾಗಿ ಮಾಜಿ ಸೈನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರಕುವುದೆಂದು ನಾನು ಊಹಿಸುತ್ತೇನೆ.

ನಾನು ಎಲ್ಲ ಮಾಜಿ ಸೈನಿಕರು ಮತ್ತು ಯುದ್ಧ ಸಂತ್ರಸ್ಥರು ಇಲಾಖೆಯ ಅಂತರ್ಜಾಲದ ಸದುಪಯೋಗ ಪಡೆದುಕೊಳ್ಳಲು ಕೋರುತ್ತೇನೆ. ಕರ್ನಾಟಕದ ಎಲ್ಲ ಯುದ್ಧ ಸಂತ್ರಸ್ಥರಿಗೆ ಮತ್ತು ಅವರ ಅವಲಂಬಿತರಿಗೆ ಈ ಸಂದರ್ಭದಲ್ಲಿ ಶುಭ ಕೋರುತ್ತಾ ಯುದ್ಧ ಸಂತ್ರಸ್ಥರಿಗೆ ಹಾಗೂ ಮಾಜಿ ಸೈನಿಕರಿಗೆ ಅತ್ಯುತ್ತಮ ಸೇವೆ ಒದಗಿಸುವಲ್ಲಿ ನಾವು ಸದಾ ಸಕ್ರಿಯರಾಗಿರುತ್ತೇವೆಂದು ತಿಳಿಸಬಯಸುತ್ತೇನೆ.

Our Armed Forces have been serving the nation with great distinction both during war and peace. The Officers and Soldiers from Karnataka have made unforgettable contribution with innumerable examples of sacrifice, boundless valour and selfless service while upholding the honour and integrity of our country.

 

Read more...

ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಇವರ ಸಂದೇಶ / Message from the Director, Department of Sainik Welfare & Resettlement

ನಾವು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸದಸ್ಯರು ಯುದ್ಧ ಸಂತ್ರಸ್ಥರು ಮತ್ತು ಅವರ ಅವಲಂಬಿತರ ಕಲ್ಯಾಣಕ್ಕಾಗಿ ಮತ್ತು ಪುನರ್ವಸತಿಗಾಗಿ ವೃತ್ತಿಪರತೆಯಿಂದ ಅತ್ಯುತ್ತಮ ಕಾರ್ಯನಿರ್ವಹಿಸಲು ಸನ್ನದ್ಧರಿದ್ದೇವೆ.

ನಮ್ಮ ರಾಜ್ಯವು ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ, ಜನರಲ್ ಕೆ ಎಸ್ ತಿಮ್ಮಯ್ಯ, ಜನರಲ್ ಜಿ ಜಿ ಬೇವೂರ, ಎಯರ್ ಚೀಫ್ ಮಾರ್ಷಲ್ ಎಲ್ ಎಮ್ ಕತ್ರೆ ಮತ್ತು ಅಡ್ಮಿರಲ್ ಓ ಎಸ್ ಡಾಸನ್ ಇವರಂತಹ  ಹಿರಿಯ ಸೇನಾಧಿಕಾರಿಗಳನ್ನು ದೇಶಕ್ಕೆ ನೀಡಿದೆ. ಕರ್ನಾಟಕ ಸರ್ಕಾರವು  ಮಾಜಿ ಸೈನಿಕರ ಹಾಗೂ ಯುದ್ಧ ಸಂತ್ರಸ್ಥರ ಕಲ್ಯಾಣ ಕಾರ್ಯಕ್ರಮದಲ್ಲಿ ಸದಾ ಸನ್ನದ್ಧವಾಗಿರುತ್ತದೆ. ನಮ್ಮ ರಾಜ್ಯದಲ್ಲಿ    ಸುಮಾರು 75,000/- ಕ್ಕಿಂದ ಹೆಚ್ಚು ಮಾಜಿ ಸೈನಿಕರು ಮತ್ತು 400 ಕ್ಕಿಂತ ಹೆಚ್ಚಿನ ಸಂಖ್ಯೆಯ ಯುದ್ಧ ಸಂತ್ರಸ್ಥರು ಮತ್ತು ಸುಮಾರು 19,200 ಮೃತ ಮಾಜಿ ಸೈನಿಕರ ಪತ್ನಿಯರು ನೊಂದಾಯಿತರಿದ್ದಾರೆ. ನೋಂದಾಯಿಸದೆ ಇರುವ ಮಾಜಿಸೈನಿಕರು ಬಹಳಷ್ಟಿದ್ದು, ಒಟ್ಟು ಸುಮಾರು 3.5 ಲಕ್ಷ ಮಾಜಿಸೈನಿಕರ ಅವಲಂಬಿತರಿರಬಹುದೆಂದು ಅಂದಾಜಿಸಲಾಗಿದೆ.

ನಮ್ಮ ರಾಜ್ಯವು ಮಾಜಿ ಸೈನಿಕರಿಗೆ ಹಾಗೂ ಯುದ್ಧ ಸಂತ್ರಸ್ಥರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿರುವ ರಾಜ್ಯಗಳಲ್ಲಿ ಒಂದಾಗಿರುತ್ತದೆ. ನಮ್ಮ ಇಲಾಖೆಯು ಯುದ್ಧ ಸಂತ್ರಸ್ಥರ, ಗಾಯಗೊಂಡ ಯೋಧರ, ಮಾಜಿ ಸೈನಿಕರ ಮತ್ತು ಅವರ ಅವಲಂಬಿತರಿಗೆ ಅತ್ಯುತ್ತಮ ಸೇವೆ ನೀಡಲು ಸದಾ  ಸಿದ್ಧರಿದ್ದು, ಈ ಅಂತರ್ಜಾಲದ ಮೂಲಕ ಎಲ್ಲರನ್ನು ತಲುಪುವ ಪ್ರಯತ್ನ ಮಾಡಿದ್ದೇವೆ.

We the members of Department of Sainik Welfare and Resettlement of Karnataka solemnly resolve to toil ceaselessly towards welfare and resettlement of exservicemen and their dependents and also all other connected tasks of the organisation in pursuit of excellence and profession.

Karnataka State has produced  great Military Leaders like Field Marshal K M Carriappa, Gen K S Thimayya, General  G G Bewoor, Air Chief Marshal  L M Katre, Admiral O S Dawson and other IAS and IPS Cadre Officers.

 

Read more...
Mig - 21s of IAFSukhois of IAFAdmiral O S DawsonIndian NavyMBT of Indian ArmyCarrier of Indian NavyFighter of IAFNavy ship - Indian NavyFd Mshl K M CariappaSuryakiran Aerobatics teamSoldiers of Indian ArmyMighty Indian NavyHelicopters of IAFGen G G BewoorGen K S ThimmayyaSoldiers of Indian ArmyShow of Might - Indian ArmyAmar Jawan MemorialAir Chief Marshal L M Katre